ದಿ ಯೆನೆಪೋಯ ಶಾಲೆ , ಜಪ್ಪಿನಮೊಗರು ಮಂಗಳೂರು ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು . ಒಂಬತ್ತನೇಯ ತರಗತಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ತದನಂತರ ಶಾಲಾ ಪ್ರಾಂಶುಪಾಲರಾದ ಶ್ರೀಯುತ ಉಜ್ವಲ್ ಮೆನೆಜಸ್ ಹಾಗೂ ಉಪಪ್ರಾಂಶುಪಾಲರಾದ ಶ್ರೀಯುತ ಪದ್ಮನಾಭನ್ ಇವರು ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಾಚಿತ್ರಕ್ಕೆ ಹಾರಾರ್ಪಣೆ ಮಾಡಿ ನಮನವನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ನಾಡಾಗೀತೆಯನ್ನು ಹಾಡಿದರು. ಎರಡನೇಯ ತರಗತಿ ಹಾಗೂ ಆರನೇಯ ತರಗತಿಯ ವಿದ್ಯಾರ್ಥಿಗಳಾದ ವಿಹಾನ್ ಪಿ. ಹಾಗೂ ಪ್ರಣವಿ . ಬಿ.ಉಚ್ಚಿಲ್ ಇವರು ಕನ್ನಡ ರಾಜ್ಯೋತ್ಸವ ದಿನದ ಮಹತ್ವವನ್ನು ತಿಳಿಸಿದರು. ಒಂದರಿಂದ ಐದನೇಯ ತರಗತಿಯ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ಹಾಡಿಗೆ ನರ್ತಿಸಿ ಎಲ್ಲರ ಮನವನ್ನು ರಂಜಿಸಿದರು. ಹತ್ತನೇಯ ತರಗತಿ ವಿದ್ಯಾರ್ಥಿನಿ ರಿಶಾ ಫಾತಿಮ ಕಾರ್ಯಕ್ರಮವನ್ನು ನಿರೂಪಿಸಿದರು . ಶಾಲಾ ಶಿಕ್ಷಕ ವೃಂದದವರು ನಾಡಿನ ಹೆಸರಾಂತ ಕವಿಗಳ ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿನಮನವನ್ನು ( ಗೀತ ಗಾಯನ )ಸಲ್ಲಿಸಿದರು.